Saturday, January 12, 2013

ಮ್ವೆಸೂರು ಪ್ರವಾಸ


ನಾವು ಎಲ್ಲೋ ಇರುವ ಪ್ರವಾಸ ತಾಣಗಳನ್ನು ನೋಡಲು ಹೋಗುತ್ತಿವಿ, ಆದರೆ ನಮ್ಮ ಪಕ್ಕಾನೇ ಇರುವ ಮೈಸೂರನ್ನು ನಾವು ನೋಡೊಕೆ ಹೋಗುವುದಿಲ್ಲ. ಮೈಸೂರ್ ಅಕ್ಕ ಪಕ್ಕ ನೋಡಲು ತುಂಬಾ ಜಾಗಗಳು ಇವೆ
ಇದು ಆದಿ ಕಾಲದ ಕರ್ನಾಟಕದ ರಾಜಧಾನಿ ಆಗಿತ್ತು ಅನ್ನೋದು ನಮಗೆಲ್ಲಾ ಮರೆತೇ ಹೋಗಿದೆ ಅಲ್ವಾ ?

ಯೋಚನೆ ಮಾಡ್ಬೆಡಿ

ಈಗ ಬನ್ನಿ ಮ್ವೆಸೂರನ್ನ ನೋಡಿ
ಬರೋಣ.............................................................................................................

ಮ್ವೆಸೂರು ದಸರಾ ಎಷ್ಟೊಂದು ಸುಂದರಾ..............................

ಅಂದು ಭಾನುವಾರ ಎಲ್ಲರಿಗೂ ರಜಾ ಅಲ್ವಾ ,,,,,,,,,, ಅದಕ್ಕೆ ನಮ್ಮ ಮನೆಯವರೆಲ್ಲಾ ಸೇರಿ ಮ್ವೆಸೂರು ಪ್ರವಾಸ ಮಾಡಬೇಕೆಂದು ನಿರ್ಧಾರ ಮಾಡಿದ್ವಿ.

ಅಣ್ಣನ ಕಾರ್ ಸಹ ಆ ದಿನ ಮನೆಯಲ್ಲೇ ಇದ್ದುದ್ದರಿಂದ ನಮಗೆ ವಾಹನದ ತೊಂದರೆ ಆಗಲಿಲ್ಲ. ಎಲ್ಲರೂ ಬೇಳಿಗ್ಗೆ ಬೇಗನೆ ಎದ್ದು ರೇಡಿ ಆದೆವು. ಮನೆಯಲ್ಲೆ ಟೀಫಿನ್ ತಯಾರಿ ಮಾಡಿ ಜೋತೆಗೆ ಕುಡಿಯಲು ನೀರು ತೆಗೆದುಕೊಂಡು ಮನೆಯಿಂದ ಹೊರಟ್ವಿ

ಬೇಳಗ್ಗಿನಜಾವದ ವಾತಾವರಣ ತುಂಬಾ ಚನ್ನಾಗಿ ಇರುತ್ತೆ ಅಲ್ವಾ..? ಕಾರ್ ನಲ್ಲಿ ಹೋಗ್ತಾ ಇದ್ರೆ ತಂಪಾದ ಗಾಳಿ ಬೀಸುತ್ತಾ ಇತ್ತು. ಬೇಳಿಗ್ಗೆ ಏನೂ ತಿಂಡಿ ಬೇರೆ ತಿಂದಿಲ್ಲ ,ಈವಾಗ ಎಲ್ಲರಿಗೂ ಹೊಟ್ಟೆ ಬೇರೆ ತಾಳಹಾಕುತ್ತಾ ಇತ್ತು ಹಸಿವೇನ ತಡಿಯೋಕೆ ಆಗ್ತಾ ಇರಲಿಲ್ಲ ,ಹಾಗೆ ಹೋಗುವಾಗ ರಸ್ತೆ ಪಕ್ಕದಲ್ಲಿ ಇರುವ ತುಂಬಾ ಪ್ರಸಿದ್ದಿಯಾದ ದಾವಣಗೇರಿ ಬೇಣ್ಣೆ ಹೊಟೇಲ್ ಇದೆ ಅಂತ ಮೊದಲೇ ಗೋತ್ತಿತ್ತು. ಅದರ ಹತ್ತಿರ ನಮ್ಮಕಾರ್ ನಿಲ್ಲಿಸಿ ಎಲ್ಲರೂ ಬೇಣ್ಣೆ ದೋಸೆಯನ್ನು ಸವಿದೆವು ಮತ್ತೆ ಕಾರ್ ನಲ್ಲಿ ಕುತ್ಕೊಂಡು ಮ್ವೆಸೂರ್ ಕಡೆ ಹೊರಟ್ವಿ.

ಹೋಗುವಾಗ ದಾರಿಯಲ್ಲಿ ಶ್ರಿರಂಗಪಟ್ಟಣ ನೋಡಿಕೊಂಡು ಒಂದಿಷ್ಟು ಫೋಟೋ ತೆಗೆದು ಮುಂದೆ ನಡೆದ್ವಿ. ಅಲ್ಲೆ ಇರುವ ಟಿಪ್ಪು ಸುಲ್ತಾನರ ಸಮಾಧಿ ನೋಡಿ ಹಾಗೆ ಮುಂದೆ ನಡದರೆ ಮೈಸೂರ್.

ಮೈಸೂರ್
ಇವಾಗ ಮ್ವೆಸೂರ್ ತಲುಪಿ ಆಯ್ತು.........!!!!!!!!!

ಮೊದಲು ನೋಡಲು ಹೋಗಿದ್ದು ಪಕ್ಷಿಧಾಮವನ್ನ.........
ವ್ಹಾ!!!.........



ಎಲ್ಲಿ ನೋಡಿದರು ಪಕ್ಷಿಗಳ ಚಿಲಿಪಿಲಿ ಗಾಯನ, ಹಾಗೆ ಒಳಗಡೆ ಹೋಗಿ ಬೋಟಿಂಗ್ ಟೀಕೆಟ್ ತೆಗೆದುಕೊಂಡು ಬೋಟ್ ನಲ್ಲಿ ಒಂದು ಸುತ್ತು ಹಾಕಲು ಹೊರಟಾಯ್ತು, ಮೋಸಳೆಗಳು , ಎಲ್ಲಿಂದಲೋ ವಲಸೆಬಂದ ವಿಧವಿಧವಾದ ಪಕ್ಷಿಗಳು . ಇದನ್ನೇಲ್ಲಾ ನೋಡಿ ತುಂಬಾನೆ ಖುಷಿಯಾಗಿ ಅಲ್ಲಿಂದ ಪಯಣವನ್ನ ಬಲಮುರಿಗೆ ಬೆಳಸಿದ್ವಿ. ಅಲ್ಲಿ ನೀರಿನಲ್ಲಿ ಅರ್ದ ಗಂಟೆಗೂ ಹೆಚ್ಚು ಸಮಯವನ್ನೂ ಕಳೆದ್ವಿ ಅಲ್ಲೆ ಬೇಲಪುರಿ ಪಾನಿಪುರಿ ತಿಂದು ಮುಂದೆ ಪ್ರಯಾಣ ಮಾಡಿದ್ವಿ.




ಈವಾಗ ಪಯಣವನ್ನ ಮೃಗಾಲಕ್ಕೆ ಬೇಳೆಸಿದ್ವಿ

ಮೃಗಾಲಯದೋಳಗೆ ಹೋಗುವಾಗ ನಮಗೆ ಬೇಕಾದ ತಿಂಡಿ ತಿನಿಸುಗಳನ್ನ ತೇಗೆದುಕೊಂಡು ಒಳಗಡೆ ಪ್ರವೇಶ ಮಾಡಿ ಅಲ್ಲೆ ಪಕ್ಕ ಇರುವ ಚಿಕ್ಕ ಪಾರ್ಕನಲ್ಲಿ ಕುಳಿತು ಎಲ್ಲರೂ ತಂದಿರುವ ನಾನಾಬಗೆಯ ತಿಂಡಿ ತಿನಿಸುಗಳನ್ನ ತಿಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಪ್ರಾಣಿಗಳ ನೋಡಲು ಕುತೂಹಲದಿಂದ ಮುಂದೆ ಸಾಗಿದ್ವಿ

ಆಕಾಶ ಎತ್ತರದ ಜೀರಾಫೆ ನಮ್ಮ ಎದುರಲ್ಲಿ !!! ಅದರ ಮುಂದೆ ನಿಂತು ನಮ್ಮವರೆಲ್ಲಾ ಸೇರಿ ಒಬ್ಬೋಬ್ಬರಾಗಿ ಪೋಟೋ ತೇಗೆಸಿಕೊಂಡು ಮುಂದೆ ಸಾಗುತ್ತಾ ನಡೆದ್ವಿ


ಸಾವಿರ ಜಾತಿಯ ಪಕ್ಷಿಗಳು!! ಅದರ ಮುಂದೆ ನಾವೆಲ್ಲಾ ಮೂಖವಿಸ್ಮಿತರಾದೆವು. ಅದನ್ನೆಲ್ಲಾ ನಮ್ಮ ಕ್ಯಾಮರಾದಲ್ಲಿ ಸೇರೆಹಿಡಿದುಕೊಂಡಾಯಿತು.


ಮೃಗಾಲಯದ ರಾಜನ ದರ್ಶನವಾಗುತ್ತಿದ್ದಂತೆ ಏನೋ ಒಂದು ರೀತಿ ಭಯ ಕುತೂಹಲ.... ಸಿಂಹ,ಹುಲಿ,ಚಿರತೆ,ಜಿಂಕೆ,ಕರಡಿ,ಮಂಗ,ಚಿಂಪಾಂಜಿ,ಕಾಡುಮೃಗ,ನರಿ,ನಾಯಿ,ಕುದರೆ,ಓಂಟೆ,ಹಂದಿ,ಅಯ್ಯೋ!!!!!ಹೇಳೋಕೆ ಸಾಕಾಗಲ್ಲ ಅಷ್ಟೊಂದು ಪ್ರಾಣಿಗಳು ಎಲ್ಲವನ್ನೂ ನೋಡಿ ಆನಂದಿಸುತ್ತಾ ಮುಂದೆ ಮುಂದೆ ಸಾಗುತ್ತಾ ನಡೆದೆವು.ನಮ್ಮೆದುರಿಗೆ ಈಗ ಕಾಣಿಸಿದ್ದು ದೊಡ್ಡ ಗಾತ್ತದ ಆನೆಗಳು ನಾನಾ ವಿಧದ ಆನೆಗಳು ಕಣ್ಣುತುಂಬಾ ನೋಡಿ ಖುಷಿಪಟ್ಟೆವು.

ಆಗಲೇ ಸ್ವಲ್ಪ ಸುಸ್ತಾಗಿ ಅಲ್ಲೆ ಒಳಗಡೆ ಇರುವ ಕ್ಯಾಂಟಿನ್ ನಲ್ಲಿ ಸ್ವಲ್ಪ ಟೀ ತಿಂಡಿ ಮುಗಿಸಿ ಹೋರಗಡೆ ಬರುವ ದಾರಿ ಕಡೆ ಹೆಜ್ಜೆ ಹಾಕುತ್ತಾ ಹಾವು ಮೋಸಳೆ ಎಲ್ಲವನ್ನೂ ನೋಡುತ್ತಾ ,,,, ನಮ್ಮ ಕಾರ್ ಇದ್ದಲ್ಲಿಗೆ ಬಂದು ಕಾರ್ ತೆಗೆದುಕೊಂಡು ಅರಮನೆ ಕಡೆ ಪ್ರಯಾಣ ಬೇಳಸಿ ಆಯ್ತು.

ಆ ದಿನ ಬೇರೆ ದಸರಾ ಅಲ್ಲಿಗೆ ಮುಟ್ಟುವುದರೋಳಗೆ ಸಂಜೆ ಆಗಿತ್ತು ಅಲ್ಲಿ ಕೇಲವು ಕಾರ್ಯಕ್ರಮಗಳು ನಡಿತಿದ್ದವು. ಅದರಲ್ಲೆ ಒಳಗಡೆ ನಡೆದು ನಮ್ಮ ನಮ್ಮ ಫೋಟೋ ತೆಗೆಸಿಕೊಂಡು ಅರಮನೆಯನ್ನು ನೋಡಿ ಕೆ.ಆರ್.ಎಸ್ ನೋಡಲು ಆತುರದಿಂದ ಕಾರ್ ತೆಗೆದುಕೊಂಡು ಹೊರಟ್ವಿ.

ಕೆ.ಆರ್.ಎಸ್ ನಾವು ಹೋಗಿ ಮುಟ್ಟಿದ ಸಮಯ ತುಂಬಾ ಆಭಾವವಾಗಿತ್ತು,ಒಳಗಡೆ ಪ್ರವೇಶ ಮಾಡಿ ಸೇತುವೆಯ ಮೇಲೆ ನಡೆದುಕೊಂಡು ಮ್ಯೂಸೀಕಲ್ ಕಾರಂಜಿ ನೋಡಲು ಒಡುತ್ತಾ ಒಡುತ್ತಾ ಒಳಗಡೆ ನಡೆದ್ವಿ.
ಎಲ್ಲೋ ಸ್ವರ್ಗಕ್ಕೆ ಬಂದ ಅನುಭವ ಎಲ್ಲಾ ಕಡೆ ತುಂಬಾನೆ ವರ್ಣರಂಜಿತವಾದ ಲ್ವೇಟ್ ಗಳ ಅಲಂಕಾರ ಅದರಮಧ್ಯೆ ಸಂಗೀತಕ್ಕೆ ತಕ್ಕಂತೆ ಕಾರಂಜಿಯ ನರ್ತನ ಇದು ನಮ್ಮನ್ನು ಒಂದು ಸಲ ಕುಣಿದುಕುಪ್ಪಳಿಸುವಂತೆ ಮಾಡಿತು ನಮ್ಮಗೆಲ್ಲಾ ತುಂಬಾನೆ ಸಂತೋಷವಾಗಿತ್ತು.

ಈಗ ಆಗಲೇ ತುಂಬಾ ವೇಳೆ ಆಗಿತ್ತು ಮನೆಗೆ ಹೋರಟು ಬರಬೇಕು ಹಸಿವು ಬೇರೆ ಆಗಿತ್ತು. ಅಲ್ಲೆ ಹೋರಗಡೆ ಬಂದು ಎಲ್ಲರೂ ಸೇರಿ ಊಟ ಮುಗಿಸಿ ಕಾರ್ ನಲ್ಲಿ ಕುಳಿತು ಮತ್ತೆ ಬೆಂಗಳೂರ್ ಕಡೆ ಪ್ರಯಾಣ ಬೇಳೆಸಿ ಮನೆಗೆ ಬಂದು ತಲುಪಲು ಮಧ್ಯ ರಾತ್ರಿ ಆಗಿತ್ತು

ನಮ್ಮ ಪ್ರಯಾಣದ ಅನುಭವದ ನೆನಪು ಮತ್ತೆ ಮತ್ತೆ ನೆನಪಾಗುತ್ತಾನೆ ಇದೆ.............

No comments: