Tuesday, January 15, 2013

ಹಳ್ಳಿಯ ಹುಡುಗಿಯ ಮುಗ್ದ ಪ್ರೀತಿ......


ಹಳ್ಳಿಯ ಹುಡುಗಿಯ ಮುಗ್ದ ಪ್ರೀತಿ......









ಅವಳು ಹುಟ್ಟಿ ಬೆಳೆದಿದ್ದು ಎಲ್ಲಾನೂ ಹಳ್ಳಿಯಲ್ಲೆ ಆ ಹಳ್ಳಿಯ ಜೀವನ ಇಂದಿಗೂ ಎಂದೆಂದಿಗೂ ಅವಿಸ್ಮರಣೀಯವಾದದ್ದು.ಅವಳು ಬೇಳೆದಿದ್ದು ಒಂದು ಬಡ ಕುಟುಂಬದಲ್ಲಿ.ಅವಳ ಮನೆಯಲ್ಲಿ ಒಬ್ಬ ತಮ್ಮ ,ಅಪ್ಪ ಅಮ್ಮ ಮತ್ತು ಇವಳಿಗೋಬ್ಬಳು ಅಕ್ಕತುಂಬಾನೆ ಸಂಪ್ರದಾಯಸ್ಥ ಕುಟುಂಬ.ಬಡವರಾದರು ಹೊಟ್ಟೆ ಬಟ್ಟೆಗೆ ಏನು ತೊಂದರೆ ಇರಲಿಲ್ಲ.ಸಂಭದಿಕರ ಜೋತೆಯಾಗಲಿ ಸ್ನೇಹಿತರ ಜೋತೆಗಾಗಲಿ ಯಾರ ಹತ್ತಿರನೂ ಮಾತನಾಡದ ತುಂಬಾ ನಾಚಿಕೆ ಸ್ವಭಾವದ ಮುಗ್ದ ಹುಡುಗಿ.

ಅವಳು ಹೈಸ್ಕೂಲ್ ಗೆ ದಿನಾಲು ಆರು ಕೀಲೊಮೀಟರ್ ನಡೆದುಕೊಂಡು ಹೋಗಿ ಬರ್ತಾ ಇದ್ದಳು. ಒಂಬತ್ತನೇ ಕ್ಲಾಸ್ ನಲ್ಲಿ ಇದ್ದಾಗ ಅವಳ ಜೋತೆಗೆ ಅವಳ ಊರಿಂದ ಕೆಲವು ಮಂದಿ ಹುಡುಗ ಹುಡುಗಿಯರು ಜೋತೆಗೆ ಹೋಗುತ್ತಿದ್ದರು . ಇವಳುಶಾಲೆಗೆ ಹೋಗೊದು ಬರೋದು ಅಷ್ಟೆ ಮಾಡ್ತಾ ಇದ್ದಳು ಅದು ಬಿಟ್ಟು ಬೇರೆ ಏನು ವಿಷಯದ ಕಡೆ ಗಮನ ಹರಿಸುತ್ತಿರಲಿಲ್ಲ. ಹೀಗೆ ದಿನ ಕಳೆದಂತೆ ಅವಳಿಗೆ ಜೋತೆಯಲ್ಲಿ ಹೋಗುತ್ತಿದ್ದ ಓರ್ವ ಹುಡುಗನ ಪರಿಚಯವಾಯಿ.
ನಂತರ ಇಬ್ಬರಿಗೂ ಗಾಡವಾದ ಗೆಳತನವಾಗುತ್ತೆ. ಹಾಗೆ ಗೆಳತನ ಪ್ರೀತಿಗೆ ತಿರುಗಿ ಪ್ರೀತಿಸಲು ಪ್ರಾರಂಭಿಸುತ್ತಾರೆ.
 ಅವಳು 2nd ಪಿಯುಸಿ ಮುಗಿಸಿ ಮುಂದೆ ಓದುಲು ಆಸೆ ಅದರೆ ಅವರ ಮನೆಯಲಿ ಬಿಡದೆ ಮದುವೆ ಮಾಡಲು ಮುಂದಾಗುತ್ತಾರೆ. ಅವಳು ಮದುವೆಗೆ ಒಪ್ಪದೆ ಸಿಟಿಯಲ್ಲಿ ಇರುವ ಅವಳ ಅಕ್ಕ-ಬಾವನ ಮನೆಗೆ ಹೋಗುತ್ತಾಳೆ ಅಲ್ಲಯೆ ಒಂದು ಸಣ್ಣ ಕೆಲಸಕ್ಕೆ ಸೇರಿಸಿಕೋಳ್ಳುತ್ತಾಳೆ ಹಾಗೆಯೇ ಒಂದು ವರ್ಷ ಕಳಿಯುತ್ತೆ ಅಲ್ಲಿಯೆ ಕೆಲಸ ಮಾಡುವ ಹುಡಗ ಪ್ರೀತಿಸುವುದಾಗಿ ತಿಳಿಸುತ್ತಾನೆ ಆಗ ಬೇಸರಗೊಂಡು ಕೆಲಸ ಬಿಟ್ಟು ಹಳ್ಳಿಗೆ ವಾಪಸ್ಸಾಗುತ್ತಾಳೆ.  
ಮತ್ತೆ ಪ್ರೀಯತಮನ ಬೇಟಿ ಮಾಡಿ ಮದುವೆ ಬಗ್ಗೆ ಮಾತನಾಡಿ ಮದುವೆಯಾಗಲು ತಿಳುಸುತ್ತಾಳೆ ಜಾತಿ- ಬೇಧ ಎದುರಾಗುತ್ತೆ. ಇವರ ಇಬ್ಬರು ಪ್ರೀತಿಯ ಬಗ್ಗೆ ಇಬ್ಬರ  ಮನೆಯಲ್ಲೂ ತಿಳಿದು ಹುಡಿಗಿಗೆ ಮದುವೆ ಮಾಡಲು ಬೇರೆ ಕಡೆ ವರನನ್ನು ಹುಡುಕುತ್ತಾರೆ. ಆಗ  ಇವಳು ಪ್ರೀಯತಮನಿಗೆ ಹೋಗಿ ತನ್ನ ಮದುವೆ ಬಗ್ಗೆ ತಿಳುಹಿಸಿ, ಅವನು ಗಾಬರಿಗೊಂಡು ಅವನ ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡಿ ಹುಡುಗಿಗೆ ತಿಳಿಸಲು ಹೇಳುತ್ತಾರೆ. ಅದರೆ ಜಾತಿ- ಬೇಧ ಹುಡುಗಿ ಮನೆಯಲ್ಲಿ ಒಪ್ಪುದಿಲ್ಲ ಬೇರೆ ವರನ ಜೋತೆ ಮದುವೆ ಮಾಡಲು ನಿಶ್ಚಯಿಸುತ್ತಾರೆ. ಇವಳ ಮದುವೆ ಸಮಯದಲ್ಲಿ ಎಲ್ಲಾರು ಮದುವೆ ಮಂಟಪಕ್ಕೆ ಹೋಗುವ ದಾರಿಯಲ್ಲಿ ಆಕಸ್ಮಿಕವಾಗಿ ಪ್ರೀಯತಮನ ಕಾರು ಎದುರು ಅಗುತ್ತೆ ಅದನ್ನು ಅವಳು ಕಾರಿನಲ್ಲಿ ಇರುವದನ್ನು ನೋಡಿ ಅವನು ಅವಳ ಗುಂಗಿನಲ್ಲೇ ಕಾರು ಒಡಿಸಿ ಬೇರೆ ಲಾರಿಗೆ ಡಿಕ್ಕಿ ಹೋಡೆದ್ದು ಅಪಘಾತವಾಗುತ್ತೆ. ಅಲ್ಲಿ ಮದುವೆ ಶಾಸ್ತ್ರ,ಇಲ್ಲಿ ಅವನ ಶಸ್ತ್ರಚಿಕಿತ್ಸೆ, ಅಲ್ಲಿ ಮದುವೆ ಸಡಗರ,ಇಲ್ಲಿ ಸುತಕದ ಚಾಯೇ  ಕೊನೆಗೂ ಅವಳ ಮದುವೆ ಅಗಿಯೇ ಹೋಯಿತ್ತು. ಇಲ್ಲಿ ಅವನು ಕೊನೆ ಉಸಿರು ಬಿಟ್ಟ.
 
 
 
 
 
 
ಅವಳ ಮದುವೆಯಾದ 9ತಿಂಗಳಿಗೆ ಗಂಡನ ಮನೆಯಿಂದ ತವರು ಮನೆಗೆ ಬರುತ್ತಾಳೆ ಎರಡು ದಿನ ಕಳಿದ ಮೇಲೆ ಅವಳು ಗಂಡನಿಗೆ ಅವಳ ತೋಟ ತೋರಿಸಲು ಕರೆದ್ಯೂತ್ತಾಳೆ. ಇವಳ ತೋಟಕ್ಕೆ ಹೋಗುವಾ ದಾರಿಯಲೇ ಪ್ರೀತಮನ ತೋಟವಿರುವುದು ಹಾಗೇ ಹೋಗುವಾಗ ಪ್ರೀಯತಮನ ಅತ್ತಿಗೆ ಎದುರು ಆಗುತ್ತಾರೆ ಅವಳು ಅಲ್ಲಿಯೆ ನಿಂತು.
ಮಾತು ಮುದುವರಿಸುತ ಆ ಕಡೆ ಈ ಕಡೆ ನೋಡುತ್ತಿರುವ ಸಮಯದಲ್ಲಿ ಒಂದು ಸಮಾಧಿ ಕಾಣ್ಣುತ್ತೆ ಅವಳು ಯಾರದು ಅದು ಸಮಾಧಿ ಅಂತ ಪ್ರಶ್ನಿಸಿದಳು. ಅದಕ್ಕೆ ಅವರು ನನ್ನ ಮೈದುನದೆಂದು ಉತ್ತರಸಿದರು ಹಾಗೆ ಏನಾಯಿತು! ಎಂದಳು ಅವರು ವಿವರವಾಗಿ ಹೇಳುತ್ತಿದಾಗೇ ಕುಸಿದು ಬಿದ್ದಳು. ಅದನ್ನು ಗಮನಿಸಿದ ಗಂಡ ಅವಳನ್ನು ಮನೆಗೆ ಕರೆದ್ಯೊದನು. ಆಗ ಅವಳಿಗೆ 5ತಿಂಗಳು ಗರ್ಭವತಿಯಾಗಿದ್ದಳು. ಅವಳು ಶಾಕ್ ನಿಂದ ಹೋರಬಾರಲೇ ಇಲ್ಲ.
ಅವಳು ಒಂದು ಮಗುವಿಗೆ ಜನ್ಮ ಕೋಟ್ಟಳು  ಅವಳು ಸ್ವಲ್ಪ ವಾಸ್ತವ ಸಿತ್ಥಿಗೆ ಬರುತ್ತಾಳೆ ಮಗುವಿಗೆ 3ತಿಂಗಳು ಆಗುತ್ತಿದಾಗೆ ಗಂಡನ ಮನೆಗೆ ಕಳುಹಿಸಿದರು.  ಆದರೆ ಅವಳು ಹಳೆಯ ವಿಷಯಗಳು ನೆನಪು ಮಾಡಿಕೊಂಡು ಮನಸ್ಸಿನಲ್ಲಿ ನೋವು, ವೇದನೆ, ದಃಖ ಪಡುತ್ತಾ ಅಳುತಿದ್ದಳು. ಸರಿಯಾಗಿ ಸಂಸಾರ ನಿಭಾಹಿಸುವುದಿಲ್ಲ ಇದನ್ನು ಗಮನಿಸಿದ ಗಂಡ ಇವಳು ಹುಚ್ಚಿಯೆಂದು ಅವಳ ತವರು ಮನೆಗೆ ಕಳುಹಿಸಿ, ಮತ್ತೆ ಎಂದಿಗೂ ಕರೆದ್ಯೂಯುವುದಿಲ್ಲ.
ಅಸಾಯಕ ಸಿತ್ಥಿಯಲ್ಲಿ ಇದ್ದಾ ಅವಳು ಮಗುವನ್ನು ಅಕ್ಕನ ಮನೆಯಲ್ಲಿ ಬಿಟ್ಟು, ಅವಳು ತವರು ಮನೆಯಲೇ ಈಗಲೂ ಹುಚ್ಚಿಯಾಗೆ ನಟನೆಮಾಡುತಾ ಇದ್ದಾಳೆ  ನೋಡಿ ವಿಧಯಾಟ ಇವಳ ಬಾಳು ಶೂನ್ಯವಾಗಿದೆ. ಪ್ರೀತಿಸಿದ ಪ್ರೀಯತಮ ಇಲ್ಲ, ಕಟ್ಟಿಕೊಂಡ ಗಂಡ ಇಲ್ಲ  ಈಗ ಅವಳು ಹೆತ್ತವರಿಗೆ ಭಾರವಾಗಿ ಇಂದಿಗೂ ಜೀವಂತವಾಗಿದ್ದಾಳೇ... ಇದು ಸತ್ಯ ಕಥೆ ಅವಳು 







ಇನ್ನೊ ಇದ್ದಾಳೇ ಇದನ್ನು .................................................................................................... ....................................................................................................................ಎಲ್ಲಾರು...













 ವಿಧಿಯಾಟ  ಅನುತ್ತಾರೆ.....................................................................................ನಿಜಾನಾ?





No comments: