Tuesday, February 5, 2013

ಮೋಸ ಹೋದ ಯುವತಿ 


 

ಫೇಸ್ ಬುಕ್ ಎನ್ನುವುದು ಎಂಥ ಮಾಯೆ!  ಅದು ಎಂಥವರನ್ನೂ ಮರುಳು ಮಾಡುತ್ತೆ , ಒಬ್ಬ ಯುವತಿಗೆ ಫೇಸ್ ಬುಕ್ ನಲ್ಲಿ ಒಬ್ಬ ಹುಡಗನ ಪರಿಚಯ ಆಗುತ್ತೆ. ಅವನು ಅವಳ ಜತೆ ತುಂಬ ಒಳ್ಳೆಯ ರೀತಿಯಲೇ ಇರುತ್ತಾನೆ. ಇಬ್ಬರೂ ಒಬ್ಬರಿಗೊಬ್ಬರು ಪೋನ್ ನಂಬರ್ ವಿನಿಮಯ ಮಾಡಿಕೋಳ್ಳುತ್ತಾರೆ. ಸ್ವಲ್ಪ ದಿನಗಳ ನಂತರ ಹುಡಗ ಯುವತಿಗೆ ಪೋನ್ ಮಾಡಿ ಅಂಕೌಟ್ ಗೆ ದುಡ್ಡು ಹಾಕಲು ಹೇಳುತ್ತಾನೆ. ಕಾರಣ ಕೇಳಿದರೆ ಮುಂದೆ  ಹೇಳುವುದಾಗಿ ತಿಳಿಸುತ್ತಾನೆ, ಅದನ್ನು ನಂಬಿದ ಯುವತಿ ಅವಳ ಹತ್ತಿರ ದುಡ್ಡು ಇಲ್ಲದೇ ಇದ್ದರೂ  ಚಿನ್ನ ಗಿರಿವಿ ಇಟ್ಟು  ಅಂಕೌಟ್ ಗೆ ಹಣ ಹಾಕುತ್ತಾಳೆ.




 ಕೆಲ ದಿನಗಳತನಕ ಆ ಹುಡುಗನ ಸುದ್ದಿಯೇ ಇರುವುದಿಲ್ಲ, ಯುವತಿನೇ ಪೋನ್ ಮಾಡಿದರು ಪೋನ್ ತೆಗೆಯುವುದಿಲ್ಲ. ಎಸ್ ಎಮ್ ಎಸ್ ಮಾಡಿದರು ಉತ್ತರಿಸುವುದಿಲ್ಲ. ಸ್ವಲ್ಪದಿನದ ನಂತರ ಪೋನ್ ಮಾಡುತ್ತಾನೆ ನನಗೆ ಆರೋಗ್ಯ ಸರಿಯಿರುವುದಿಲ್ಲ ಎಂಬುದಾಗಿ ತಿಳುಸುತ್ತಾನೆ ಭಯಪಟ್ಟ ಯುವತಿ ಏನೂ ಆಯಿತ್ತು ಎಂದು ಕೇಳುತ್ತಾಳೆ ನನಗೆ ಬ್ರೈನ್ ಟ್ಯೊಮರ್ ಎಂದು ತಿಳುಸುತ್ತಾನೆ ಅದನ್ನು ಕೇಳಿದ ಯುವತಿ ದುಃಖಪಡುತ್ತಾಳೆ ಅವನಿಗೆ ಸಮಾಧಾನ ಮಾಡುತ್ತಾಳೆ. ಹಾಗೇ ಸ್ವಲ್ಪದಿನದ ನಂತರ ಮತ್ತೆ ಅಂಕೌಟ್ ಗೆ ದುಡ್ಡು ಹಾಕುವುದಾಗಿ ಹೇಳುತ್ತಾನೆ ಕಾರಣ ಕೇಳದೇ ಹಾಕುತ್ತಾಳೆ. ಮತ್ತೆ ಪೋನ್ ಇಲ್ಲ ಎಸ್ ಎಮ್ ಎಸ್ ಇಲ್ಲ ಯುವತಿ ಎಷ್ಟು ಪ್ರಯತ್ನಪಟ್ಟರು ಆ ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ನೋಂದ ಯುವತಿ ಸುಮ್ಮೆನೆ ಆಗುತ್ತಾಳೆ, ಮತ್ತೆ ಸ್ವಲ್ಪದಿನದ ನಂತರ ಆ ಕಡೆಯಿಂದ ಪೋನ್ ದುಡ್ಡಿಗಾಗಿ ಮತ್ತೆ ಕಾರಣ ಹೇಳದೇ ದುಡ್ಡು ಕೋಡುವುದಿಲ್ಲ ಎನ್ನುತ್ತಾಳೆ ಅದನ್ನು ಕೇಳಿದ ಅವನು ಪೋನ್ ಇಟ್ಟುಬಿಡುತ್ತಾನೆ. ಯುವತಿ ಪೋನ್ ಮಾಡಿ ಯಾಕೆ ಯಾವಗಲು ದುಡ್ಡು ನಿಮಗೆ ಎಂದು ಕೇಳಿದರೆ ನನ್ನ ಸಬಂಳ ಪೋರ್ತಿ ಅನಾಥ ಅಶ್ರಮಕ್ಕೆ ಹೋಗುತೆ ಅದಕ್ಕೆ ನಾನು ನಿನ್ನ ದುಡ್ಡು ಅನಾಥ ಅಶ್ರಮಕ್ಕೆ ಕೋಡುತ್ತಿದ್ದೆನೆ,ನಿಮ್ಮಗೂ ಒಳ್ಳೆಯದು ಆಗುವುದು ಎಂದು ತಿಳುಸುತ್ತಾನೆ ಅದನ್ನು ನಂಬಿ ಸುಮ್ಮನೆ ಆಗುತ್ತಾಳೆ. ಮತ್ತೆ ಯುವತಿ ಪೋನ್ ಮಾಡಿದರೆ ಆ ಕಡೆಯಿಂದ ಎಸ್ ಎಮ್ ಎಸ್ ಬರುತ್ತೆ ನೀನು ನನಗೆ ತೊಂದರೆ ಕೋಡುತ್ತಿದಿಯ ಮತ್ತೆ ಪೋನ್ ಎಸ್ ಎಮ್ ಎಸ್ ಮಾಡಬೇಡ ಎಂಬುದಾಗಿ ನೋಡಿ ದುಡ್ಡು ಕೋಡುವುದಿಲ್ಲ ಎಂದ ತಕ್ಷಣ ಹೇಗೆ ಮಾಡುತ್ತಾರೆ ಅವನಿಗೆ ಯಾವುದೇ ಕಾಯಿಲೇ ಇರುವುದಿಲ್ಲ ಯಾವುದೇ ಅನಾಥ ಅಶ್ರಮಕ್ಕೆ ದುಡ್ಡು ಕೊಡುವುದಿಲ್ಲ ಯುವತಿಗೆ ನಂಬಿಸಿ ಮೋಸಮಾಡಿ ದುಡ್ಡು ತಿನ್ನುತಿದ್ದ. ಇತರ ಜನ ಇರತ್ತಾರೆ ಇಗಲಾದರು ಎಚ್ಚುತ್ತುಕೊಳ್ಳಿ ಮೋಸ ಹೋಗೊರು ಇದ್ದರೆ ಮೋಸಮಾಡೊರು ಇದ್ದೆ ಇರತ್ತಾರೆ ಹುಷಾರು..........................................................................................................................!

No comments: