Friday, May 24, 2013
Friday, April 12, 2013
ಯುಗಾದಿ ಹಬ್ಬ
ಆ ದಿನಗಳ ಆನಂದ ಇಂದಿಗೂ ಜೊತೆ ಬರಲಿ
ಈ ವರುಷದ ಸವಿ ಘಳಿಗೆಯಲಿ....................
ಮಾವು ಬೇವು ಬೆಲ್ಲಗಳ ಆ ಗಂಧವು ಹೊತ್ತು ತರಲಿ
ನಮ್ಮ ಬಾಳಿಗೆ ಸಿಹಿ ಕಹಿಗಳ ಮಿಲನದ ಆನಂದ
ನವ ದಂಪತಿಗಳಾಗಿ ಜೊತಿಗಿರಲಿ ಜೀವನ ಪರಿಯಂತ
ಸಿಹಿ ಹೆಚ್ಚಾದಾಗ ಹಿಗ್ಗದೇ, ಕಹಿ
ಹೆಚ್ಚಾದಾಗ ಕುಗ್ಗದೇ
ಎರಡೊಟ್ಟಿಗೆ ಸಾಗಲಿ
......................................
ಕಷ್ಟ- ಸುಖಗಳನ್ನು, ಬೇವು-ಬೆಲ್ಲದ ರೀತಿಯಲಿ
ಸ್ವಿಕರಿಸುತ್ತಾ
ಬನ್ನಿ ಆಚರಿಸೋಣ ನಮ್ಮ ಈ
ಹಬ್ಬವನ್ನು.
ಎಲ್ಲಾರಿಗೂ ಯುಗಾದಿ ಹಬ್ಬದ ಶುಭಾಷೆಯಗಳು
ಮತ್ತು ಹೊಸ ವರ್ಷದ ಶುಭಾಷೆಯಗಳು
Thursday, February 28, 2013
ಮನಸ್ಸಿನ ನೋವಿನ ಪ್ರೀತಿ
ನಾಳೆ ಎಂಬುದು ಕಷ್ಟ
ಇಂದು ಬಂದಿದೆ ಸುಖ
ಕಷ್ಟ-ಸುಖಗಳ ನಡುವೆ ಸೇರಿಸಲೇಕೆ
ಕಾಣದಿಹ ದಾರಿಯಲಿ
ಮುಂದುವರೆಯದ ಪ್ರೀತಿಗೆ
ನೆನೆಯುತ ನೀ ಮರುಗಲೇಕೆ
ಸರಳತೆಯ ದಾರಿಯಲಿ
ಪ್ರೀತಿಯ ಚಿಂತೆಯಲಿ ಕೂರಬೇಡ
ಆ ಹುಟ್ಟದ ಪ್ರೀತಿಯನ್ನು ಬಿಟ್ಟುಬೀಡು
ನಾಳೆ ಬರುವ ದುಃಖಕ್ಕೆ
ಇಂದು ಮರುಗ ಬೇಡ
ಇಂದಿನ ದಿನಕ್ಕೆ ನಾಳೆ ಎಂಬ
ಭಾವನೆ ಬೆರೆಸಲೇಕೆ
ಈಗ ನಗುತಿರಲು
ಇಂದು ಸುಖವಿರಲು
ಸಂತೋಷ ಉಕ್ಕಿರಲು
ಬಾಳು ಬೆಳಗುವುದೆಂದು ಮರೆಯಲೇಕೆ
ಕನಸಿನ ಪ್ರೀತಿಯ
ಬೆಂಕಿಯಲಿ ದಹಿಸಲು
ಮೂಡದ ಆ ಪ್ರೀತಿಗೆ ಕಾಯಬೇಡ
ಮನಸ್ಸನು ಸಮಧಾನಪಡಸಲೇಕೆ
ಇಂದು ಬಂದಿದೆ ಸುಖ
ಕಷ್ಟ-ಸುಖಗಳ ನಡುವೆ ಸೇರಿಸಲೇಕೆ
ಕಾಣದಿಹ ದಾರಿಯಲಿ
ಮುಂದುವರೆಯದ ಪ್ರೀತಿಗೆ
ನೆನೆಯುತ ನೀ ಮರುಗಲೇಕೆ
ಸರಳತೆಯ ದಾರಿಯಲಿ
ಪ್ರೀತಿಯ ಚಿಂತೆಯಲಿ ಕೂರಬೇಡ
ಆ ಹುಟ್ಟದ ಪ್ರೀತಿಯನ್ನು ಬಿಟ್ಟುಬೀಡು
ನಾಳೆ ಬರುವ ದುಃಖಕ್ಕೆ
ಇಂದು ಮರುಗ ಬೇಡ
ಇಂದಿನ ದಿನಕ್ಕೆ ನಾಳೆ ಎಂಬ
ಭಾವನೆ ಬೆರೆಸಲೇಕೆ
ಈಗ ನಗುತಿರಲು
ಇಂದು ಸುಖವಿರಲು
ಸಂತೋಷ ಉಕ್ಕಿರಲು
ಬಾಳು ಬೆಳಗುವುದೆಂದು ಮರೆಯಲೇಕೆ
ಕನಸಿನ ಪ್ರೀತಿಯ
ಬೆಂಕಿಯಲಿ ದಹಿಸಲು
ಮೂಡದ ಆ ಪ್ರೀತಿಗೆ ಕಾಯಬೇಡ
ಮನಸ್ಸನು ಸಮಧಾನಪಡಸಲೇಕೆ
Wednesday, February 20, 2013
ಮರೆಯಲಾಗದ ನೆನಪು
ಮರೆಯಾಗದ ನೆನಪೆ
ಏಕೆ ಸದಾ ಕಾಡುತ್ತಿರುವೆ
ಹಗಲು ರಾತ್ರಿ
ನಿನ್ನ ನೆನದು ಕನವರಿಸುತ್ತಿರುವೆ
ಆ ದಿನ ನೆನಪಾಗುತ್ತಿದೆ
ಚಂದ್ರನು ನಾಚಿ ಮೋಡದ ಹಿಂದೆ
ಮರೆಯಾಗುತ್ತಿದ್ದ.....................
ನಮ್ಮ ಆ ಪ್ರೇಮವನ್ನು ನೋಡಿ
ಆ ದಿನ ನಾ ಬರುವಿಕೆಗೆ ನೀ ಕಾದ್ದಿದೆ
ನಾ ತಡವಾಗಿ ಬಂದ ಕ್ಷಣಗಳು
ನೀ ಕಾದು ಬೇಸರಗೊಂಡಿದ್ದು, ಮತ್ತೆ
ನನ್ನ ನೋಡಿ ನಿನ್ನ ಮನಸ್ಸು ಉಲ್ಲಾಸಗೊಂಡು
ಮುಗುಳು ನಗೆ ಬಿರಿದ್ದು...........................
ಆ ನಗರದ ಬೀದಿ ದೀಪಗಳ ಬೆಳಕಿನಲ್ಲಿ
ಕೈ ಕೈ ಹಿಡಿದು ಸುತ್ತಿದ್ದು, ಆ ಸುಂದರ
ಉದ್ಯಾನದಲ್ಲಿ ಮೈ ಮರೆತ ಘಳಿಗೆ
ಯಾವ ಕವಿಯು ವರ್ಣನೆ ಮಾಡಲಾರ
ನಮ್ಮ ಮಧುರ ಮಿಲನದ ಕವನ
ಏಕೆ ಸದಾ ಕಾಡುತ್ತಿರುವೆ
ಹಗಲು ರಾತ್ರಿ
ನಿನ್ನ ನೆನದು ಕನವರಿಸುತ್ತಿರುವೆ
ಆ ದಿನ ನೆನಪಾಗುತ್ತಿದೆ
ಚಂದ್ರನು ನಾಚಿ ಮೋಡದ ಹಿಂದೆ
ಮರೆಯಾಗುತ್ತಿದ್ದ................
ನಮ್ಮ ಆ ಪ್ರೇಮವನ್ನು ನೋಡಿ
ಆ ದಿನ ನಾ ಬರುವಿಕೆಗೆ ನೀ ಕಾದ್ದಿದೆ
ನಾ ತಡವಾಗಿ ಬಂದ ಕ್ಷಣಗಳು
ನೀ ಕಾದು ಬೇಸರಗೊಂಡಿದ್ದು, ಮತ್ತೆ
ನನ್ನ ನೋಡಿ ನಿನ್ನ ಮನಸ್ಸು ಉಲ್ಲಾಸಗೊಂಡು
ಮುಗುಳು ನಗೆ ಬಿರಿದ್ದು......................
ಆ ನಗರದ ಬೀದಿ ದೀಪಗಳ ಬೆಳಕಿನಲ್ಲಿ
ಕೈ ಕೈ ಹಿಡಿದು ಸುತ್ತಿದ್ದು, ಆ ಸುಂದರ
ಉದ್ಯಾನದಲ್ಲಿ ಮೈ ಮರೆತ ಘಳಿಗೆ
ಯಾವ ಕವಿಯು ವರ್ಣನೆ ಮಾಡಲಾರ
ನಮ್ಮ ಮಧುರ ಮಿಲನದ ಕವನ
Friday, February 8, 2013
ನಿನ್ನ ನೆನಪು
ಏನೀ ಕಾತರ
ಏನೀ ಸಡಗರ
ನಿನ್ನ ಆಗಮನಕ್ಕೆ
ಈ ಸಂಭ್ರಮ,
ನಿನ್ನ ಕಂಡೊಡನೆ
ನೇಸರನ್ನು ನಾಚುವಂತೆ
ಕಾಣುತ್ತಿತ್ತು ನಿನ್ನ ಮೈಕಟ್ಟು,
ತಿಂಗಳಿಗೊಮ್ಮೆ ನೀ
ಬಂದೆ ಬರುವೇ
ನಿನ್ನ ಅಂದವಾ ನೋಡಿ
ನಾಚಿಕೆಯ ಮಂಜು
ತೆರೆಯ ಮುಚ್ಚಿಸಿದಂತೆ,
ನಿನ್ನ ತುಂಟಿಯ ರಂಗು
ನನ್ನ ಮನದಲ್ಲಿ
ಗುಂಗುನ್ನು ಎಬ್ಬಿಸಿತು
ಸಿಹಿ ಮುತ್ತು ನೀಡುವ ಬಯಕೆ,
ನೀ ಸನಿಹ ಬಂದಷ್ಟು
ಮನಸ್ಸಿನಲ್ಲಿ ತುಂಬಿದ
ಆಸೆ ಮೈ ಮರಿಸಿತು
ಬಾಚಿ ಬಿಗಿದಪ್ಪುವ ಆಸೆ
ನೀ ತುಂಬ ಎತ್ತರದಲ್ಲಿ ಇರುವೇ
ನಿನ್ನ ನೋಡಲು ತಿಂಗಳು ಕಾಯಬೇಕು
ನೀ ಬಂದೆ ಬರುವೇ ಹುಣ್ಣಿಮೆಯ ದಿನದಂದ್ದು,
ಹುಣ್ಣಿಮಯ ರಾತ್ರಿಯಲ್ಲಿ ಬೆಳದಿಂಗಳ
ಊಟ ಮಾಡಿಸಿ ನಿನ್ನ ಆಲಿಂಗನದಲ್ಲಿ
ಮೈ ಮರಿಯುವ ಆಸೆ
ನೀ ಬರುವ ಸಂಭ್ರಮಕ್ಕೆ ಕಾಯುತ್ತಿರುವೇ.......................
Tuesday, February 5, 2013
ನನ್ನಿಂದಾದ ಅನಾಹುತ
ಒಂದು ದಿನ ಅತ್ತೆ ವಾಂಕಿಂಗ್ ಗೆ ಅಂತ ಸಂಜೆಯ ವೇಳೆ ಹೊರ ನಡೆದರು.ಆ ದಿನ
ಅವರು ಬರುವುದು ತಡವಾಯಿಗತು ಮನೆಗೆ ವಾಪಸ್ ಬಂದ
ತಕ್ಷಣ ಅತ್ತೆ ನನನ್ನು ಕರೆದು ಸಿಹಿ ಮಾಡಲು ತಿಳಿಸಿದರು. ನಾನು ಕಾರಣ ಕೇಳಿದೆ , ಅತ್ತೆ ನೀನು ಮೊದಲು ಸಿಹಿ ಮಾಡು, ನಂತರ
ವಿಷಯ ತಿಳುಸುವುದಾಗಿ ಹೇಳಿ ಅತ್ತೆ ಬಾಗಿಲಲೇ ಮಗನಿಗಾಗಿ ಕಾಯುತೊಡಗಿದರು. ಮಗ ಬಂದ ತಕ್ಷಣ ಕೈ
ಕಾಲು ಮುಖ ತೊಳೆದು ಬಾ, ನಿನಗೆ ಸಿಹಿ ತಿನ್ನಿಸಬೇಕು
ಎಂದು ಹೇಳಿ ಸಿಹಿ ತರಲು ಒಳ ನಡೆದರು. ಮಗ ರೆಡಿಯಾಗಿ ಬಂದ. ಅತ್ತೆ ಮಗನಿಗೆ
ಸಿಹಿಕೊಟ್ಟು, ಇವತ್ತು ನಮ್ಮ ಬೀದಿಯಲೇ ವಾಂಕಿಂಗ್ ಹೋಗಿದ್ದೆ. ಎಲ್ಲಾರು ನಿಮ್ಮ ಸೊಸೆಯೆಂದ ತಕ್ಷಣ
ನಾನು ಸುಮ್ಮನಿರದೇ ಏನು ಎಂದೆ. ಸೊಸೆ ಯಾರ ಜೊತೆ ಸೇರಲ್ಲ, ಸೊಸೆ ಸರಿಯಿಲ್ಲಾ ಎಂದು ಹೇಳಿದರೆ, ನೀವು ಬಿಟ್ಟರೆ ತಾನೆ ನಾನು ಎಲ್ಲಾರ ಜೊತೆ ಸೇರೊದ್ದು ಕೋಪಗೊಂಡು ಒಳ ನಡೆದೆ. ಅತ್ತೆ ಬೇಸರವಾಗಿ ನಮ್ಮ ಬೀದಿಯಲ್ಲಿ ಎಲ್ಲಾರು ಹೇಳುತ್ತಿದ್ದರು
ನಿಮ್ಮ ಸೊಸೆ ಎಷ್ಷು ಸರಳ, ದೊಡ್ಡವರು ಎಂದರೇ ಏನ್ನು ಗೌವರವ ಒಳ್ಳೆಯ ಸೊಸೆಯನ್ನು ತಂದಿರುವೇ ಅಂದರೂ
ಆ ಖುಷಿಗೆ ಈ ಸಿಹಿ ಎಂದು ಹೇಳುತ್ತಾರೆ. ಅಲ್ಲೇ ಕಂದ್ದು ಕೇಳುತ್ತಿದ್ದ ನಾನು ಅತ್ತೆಗೆ ಕ್ಷಮೆ ಕೇಳಿದೆ
ಆದರೂ ಅತ್ತೆಗೆ ನನ್ನ ಮಾತಿನಿಂದ ಬೇಸರಗೋಡರು. ತಿಳಿಯದೇ ಮಾತಡಿದ ತಪ್ಪಿಗೆ, ತಾಳ್ಮೆ
ಇಲ್ಲದೇ ಇದ್ದರೆ ಎಷ್ಷುಯಲ್ಲಾ ಅನಾಹುತ ನೋಡಿ ಇಬ್ಬರು ಮನಸ್ಸಿಗೂ ನೋವುಂಟಾಯಿತು.........................................................................................
ಮೋಸ ಹೋದ ಯುವತಿ
ಫೇಸ್ ಬುಕ್ ಎನ್ನುವುದು ಎಂಥ ಮಾಯೆ! ಅದು ಎಂಥವರನ್ನೂ ಮರುಳು ಮಾಡುತ್ತೆ , ಒಬ್ಬ ಯುವತಿಗೆ ಫೇಸ್ ಬುಕ್ ನಲ್ಲಿ ಒಬ್ಬ ಹುಡಗನ ಪರಿಚಯ ಆಗುತ್ತೆ. ಅವನು ಅವಳ ಜತೆ ತುಂಬ ಒಳ್ಳೆಯ ರೀತಿಯಲೇ ಇರುತ್ತಾನೆ. ಇಬ್ಬರೂ ಒಬ್ಬರಿಗೊಬ್ಬರು ಪೋನ್ ನಂಬರ್ ವಿನಿಮಯ ಮಾಡಿಕೋಳ್ಳುತ್ತಾರೆ. ಸ್ವಲ್ಪ ದಿನಗಳ ನಂತರ ಹುಡಗ ಯುವತಿಗೆ ಪೋನ್ ಮಾಡಿ ಅಂಕೌಟ್ ಗೆ ದುಡ್ಡು ಹಾಕಲು ಹೇಳುತ್ತಾನೆ. ಕಾರಣ ಕೇಳಿದರೆ ಮುಂದೆ ಹೇಳುವುದಾಗಿ ತಿಳಿಸುತ್ತಾನೆ, ಅದನ್ನು ನಂಬಿದ ಯುವತಿ ಅವಳ ಹತ್ತಿರ ದುಡ್ಡು ಇಲ್ಲದೇ ಇದ್ದರೂ ಚಿನ್ನ ಗಿರಿವಿ ಇಟ್ಟು ಅಂಕೌಟ್ ಗೆ ಹಣ ಹಾಕುತ್ತಾಳೆ.
ಕೆಲ ದಿನಗಳತನಕ ಆ ಹುಡುಗನ ಸುದ್ದಿಯೇ ಇರುವುದಿಲ್ಲ, ಯುವತಿನೇ ಪೋನ್ ಮಾಡಿದರು ಪೋನ್ ತೆಗೆಯುವುದಿಲ್ಲ. ಎಸ್ ಎಮ್ ಎಸ್ ಮಾಡಿದರು ಉತ್ತರಿಸುವುದಿಲ್ಲ. ಸ್ವಲ್ಪದಿನದ ನಂತರ ಪೋನ್ ಮಾಡುತ್ತಾನೆ ನನಗೆ ಆರೋಗ್ಯ ಸರಿಯಿರುವುದಿಲ್ಲ ಎಂಬುದಾಗಿ ತಿಳುಸುತ್ತಾನೆ ಭಯಪಟ್ಟ ಯುವತಿ ಏನೂ ಆಯಿತ್ತು ಎಂದು ಕೇಳುತ್ತಾಳೆ ನನಗೆ ಬ್ರೈನ್ ಟ್ಯೊಮರ್ ಎಂದು ತಿಳುಸುತ್ತಾನೆ ಅದನ್ನು ಕೇಳಿದ ಯುವತಿ ದುಃಖಪಡುತ್ತಾಳೆ ಅವನಿಗೆ ಸಮಾಧಾನ ಮಾಡುತ್ತಾಳೆ. ಹಾಗೇ ಸ್ವಲ್ಪದಿನದ ನಂತರ ಮತ್ತೆ ಅಂಕೌಟ್ ಗೆ ದುಡ್ಡು ಹಾಕುವುದಾಗಿ ಹೇಳುತ್ತಾನೆ ಕಾರಣ ಕೇಳದೇ ಹಾಕುತ್ತಾಳೆ. ಮತ್ತೆ ಪೋನ್ ಇಲ್ಲ ಎಸ್ ಎಮ್ ಎಸ್ ಇಲ್ಲ ಯುವತಿ ಎಷ್ಟು ಪ್ರಯತ್ನಪಟ್ಟರು ಆ ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ನೋಂದ ಯುವತಿ ಸುಮ್ಮೆನೆ ಆಗುತ್ತಾಳೆ, ಮತ್ತೆ ಸ್ವಲ್ಪದಿನದ ನಂತರ ಆ ಕಡೆಯಿಂದ ಪೋನ್ ದುಡ್ಡಿಗಾಗಿ ಮತ್ತೆ ಕಾರಣ ಹೇಳದೇ ದುಡ್ಡು ಕೋಡುವುದಿಲ್ಲ ಎನ್ನುತ್ತಾಳೆ ಅದನ್ನು ಕೇಳಿದ ಅವನು ಪೋನ್ ಇಟ್ಟುಬಿಡುತ್ತಾನೆ. ಯುವತಿ ಪೋನ್ ಮಾಡಿ ಯಾಕೆ ಯಾವಗಲು ದುಡ್ಡು ನಿಮಗೆ ಎಂದು ಕೇಳಿದರೆ ನನ್ನ ಸಬಂಳ ಪೋರ್ತಿ ಅನಾಥ ಅಶ್ರಮಕ್ಕೆ ಹೋಗುತೆ ಅದಕ್ಕೆ ನಾನು ನಿನ್ನ ದುಡ್ಡು ಅನಾಥ ಅಶ್ರಮಕ್ಕೆ ಕೋಡುತ್ತಿದ್ದೆನೆ,ನಿಮ್ಮಗೂ ಒಳ್ಳೆಯದು ಆಗುವುದು ಎಂದು ತಿಳುಸುತ್ತಾನೆ ಅದನ್ನು ನಂಬಿ ಸುಮ್ಮನೆ ಆಗುತ್ತಾಳೆ. ಮತ್ತೆ ಯುವತಿ ಪೋನ್ ಮಾಡಿದರೆ ಆ ಕಡೆಯಿಂದ ಎಸ್ ಎಮ್ ಎಸ್ ಬರುತ್ತೆ ನೀನು ನನಗೆ ತೊಂದರೆ ಕೋಡುತ್ತಿದಿಯ ಮತ್ತೆ ಪೋನ್ ಎಸ್ ಎಮ್ ಎಸ್ ಮಾಡಬೇಡ ಎಂಬುದಾಗಿ ನೋಡಿ ದುಡ್ಡು ಕೋಡುವುದಿಲ್ಲ ಎಂದ ತಕ್ಷಣ ಹೇಗೆ ಮಾಡುತ್ತಾರೆ ಅವನಿಗೆ ಯಾವುದೇ ಕಾಯಿಲೇ ಇರುವುದಿಲ್ಲ ಯಾವುದೇ ಅನಾಥ ಅಶ್ರಮಕ್ಕೆ ದುಡ್ಡು ಕೊಡುವುದಿಲ್ಲ ಯುವತಿಗೆ ನಂಬಿಸಿ ಮೋಸಮಾಡಿ ದುಡ್ಡು ತಿನ್ನುತಿದ್ದ. ಇತರ ಜನ ಇರತ್ತಾರೆ ಇಗಲಾದರು ಎಚ್ಚುತ್ತುಕೊಳ್ಳಿ ಮೋಸ ಹೋಗೊರು ಇದ್ದರೆ ಮೋಸಮಾಡೊರು ಇದ್ದೆ ಇರತ್ತಾರೆ ಹುಷಾರು..........................................................................................................................!

ಫೇಸ್ ಬುಕ್ ಎನ್ನುವುದು ಎಂಥ ಮಾಯೆ! ಅದು ಎಂಥವರನ್ನೂ ಮರುಳು ಮಾಡುತ್ತೆ , ಒಬ್ಬ ಯುವತಿಗೆ ಫೇಸ್ ಬುಕ್ ನಲ್ಲಿ ಒಬ್ಬ ಹುಡಗನ ಪರಿಚಯ ಆಗುತ್ತೆ. ಅವನು ಅವಳ ಜತೆ ತುಂಬ ಒಳ್ಳೆಯ ರೀತಿಯಲೇ ಇರುತ್ತಾನೆ. ಇಬ್ಬರೂ ಒಬ್ಬರಿಗೊಬ್ಬರು ಪೋನ್ ನಂಬರ್ ವಿನಿಮಯ ಮಾಡಿಕೋಳ್ಳುತ್ತಾರೆ. ಸ್ವಲ್ಪ ದಿನಗಳ ನಂತರ ಹುಡಗ ಯುವತಿಗೆ ಪೋನ್ ಮಾಡಿ ಅಂಕೌಟ್ ಗೆ ದುಡ್ಡು ಹಾಕಲು ಹೇಳುತ್ತಾನೆ. ಕಾರಣ ಕೇಳಿದರೆ ಮುಂದೆ ಹೇಳುವುದಾಗಿ ತಿಳಿಸುತ್ತಾನೆ, ಅದನ್ನು ನಂಬಿದ ಯುವತಿ ಅವಳ ಹತ್ತಿರ ದುಡ್ಡು ಇಲ್ಲದೇ ಇದ್ದರೂ ಚಿನ್ನ ಗಿರಿವಿ ಇಟ್ಟು ಅಂಕೌಟ್ ಗೆ ಹಣ ಹಾಕುತ್ತಾಳೆ.
ಕೆಲ ದಿನಗಳತನಕ ಆ ಹುಡುಗನ ಸುದ್ದಿಯೇ ಇರುವುದಿಲ್ಲ, ಯುವತಿನೇ ಪೋನ್ ಮಾಡಿದರು ಪೋನ್ ತೆಗೆಯುವುದಿಲ್ಲ. ಎಸ್ ಎಮ್ ಎಸ್ ಮಾಡಿದರು ಉತ್ತರಿಸುವುದಿಲ್ಲ. ಸ್ವಲ್ಪದಿನದ ನಂತರ ಪೋನ್ ಮಾಡುತ್ತಾನೆ ನನಗೆ ಆರೋಗ್ಯ ಸರಿಯಿರುವುದಿಲ್ಲ ಎಂಬುದಾಗಿ ತಿಳುಸುತ್ತಾನೆ ಭಯಪಟ್ಟ ಯುವತಿ ಏನೂ ಆಯಿತ್ತು ಎಂದು ಕೇಳುತ್ತಾಳೆ ನನಗೆ ಬ್ರೈನ್ ಟ್ಯೊಮರ್ ಎಂದು ತಿಳುಸುತ್ತಾನೆ ಅದನ್ನು ಕೇಳಿದ ಯುವತಿ ದುಃಖಪಡುತ್ತಾಳೆ ಅವನಿಗೆ ಸಮಾಧಾನ ಮಾಡುತ್ತಾಳೆ. ಹಾಗೇ ಸ್ವಲ್ಪದಿನದ ನಂತರ ಮತ್ತೆ ಅಂಕೌಟ್ ಗೆ ದುಡ್ಡು ಹಾಕುವುದಾಗಿ ಹೇಳುತ್ತಾನೆ ಕಾರಣ ಕೇಳದೇ ಹಾಕುತ್ತಾಳೆ. ಮತ್ತೆ ಪೋನ್ ಇಲ್ಲ ಎಸ್ ಎಮ್ ಎಸ್ ಇಲ್ಲ ಯುವತಿ ಎಷ್ಟು ಪ್ರಯತ್ನಪಟ್ಟರು ಆ ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ನೋಂದ ಯುವತಿ ಸುಮ್ಮೆನೆ ಆಗುತ್ತಾಳೆ, ಮತ್ತೆ ಸ್ವಲ್ಪದಿನದ ನಂತರ ಆ ಕಡೆಯಿಂದ ಪೋನ್ ದುಡ್ಡಿಗಾಗಿ ಮತ್ತೆ ಕಾರಣ ಹೇಳದೇ ದುಡ್ಡು ಕೋಡುವುದಿಲ್ಲ ಎನ್ನುತ್ತಾಳೆ ಅದನ್ನು ಕೇಳಿದ ಅವನು ಪೋನ್ ಇಟ್ಟುಬಿಡುತ್ತಾನೆ. ಯುವತಿ ಪೋನ್ ಮಾಡಿ ಯಾಕೆ ಯಾವಗಲು ದುಡ್ಡು ನಿಮಗೆ ಎಂದು ಕೇಳಿದರೆ ನನ್ನ ಸಬಂಳ ಪೋರ್ತಿ ಅನಾಥ ಅಶ್ರಮಕ್ಕೆ ಹೋಗುತೆ ಅದಕ್ಕೆ ನಾನು ನಿನ್ನ ದುಡ್ಡು ಅನಾಥ ಅಶ್ರಮಕ್ಕೆ ಕೋಡುತ್ತಿದ್ದೆನೆ,ನಿಮ್ಮಗೂ ಒಳ್ಳೆಯದು ಆಗುವುದು ಎಂದು ತಿಳುಸುತ್ತಾನೆ ಅದನ್ನು ನಂಬಿ ಸುಮ್ಮನೆ ಆಗುತ್ತಾಳೆ. ಮತ್ತೆ ಯುವತಿ ಪೋನ್ ಮಾಡಿದರೆ ಆ ಕಡೆಯಿಂದ ಎಸ್ ಎಮ್ ಎಸ್ ಬರುತ್ತೆ ನೀನು ನನಗೆ ತೊಂದರೆ ಕೋಡುತ್ತಿದಿಯ ಮತ್ತೆ ಪೋನ್ ಎಸ್ ಎಮ್ ಎಸ್ ಮಾಡಬೇಡ ಎಂಬುದಾಗಿ ನೋಡಿ ದುಡ್ಡು ಕೋಡುವುದಿಲ್ಲ ಎಂದ ತಕ್ಷಣ ಹೇಗೆ ಮಾಡುತ್ತಾರೆ ಅವನಿಗೆ ಯಾವುದೇ ಕಾಯಿಲೇ ಇರುವುದಿಲ್ಲ ಯಾವುದೇ ಅನಾಥ ಅಶ್ರಮಕ್ಕೆ ದುಡ್ಡು ಕೊಡುವುದಿಲ್ಲ ಯುವತಿಗೆ ನಂಬಿಸಿ ಮೋಸಮಾಡಿ ದುಡ್ಡು ತಿನ್ನುತಿದ್ದ. ಇತರ ಜನ ಇರತ್ತಾರೆ ಇಗಲಾದರು ಎಚ್ಚುತ್ತುಕೊಳ್ಳಿ ಮೋಸ ಹೋಗೊರು ಇದ್ದರೆ ಮೋಸಮಾಡೊರು ಇದ್ದೆ ಇರತ್ತಾರೆ ಹುಷಾರು........................
Tuesday, January 15, 2013
ಹಳ್ಳಿಯ ಹುಡುಗಿಯ ಮುಗ್ದ ಪ್ರೀತಿ......
ಹಳ್ಳಿಯ ಹುಡುಗಿಯ ಮುಗ್ದ ಪ್ರೀತಿ......
ಅವಳು ಹುಟ್ಟಿ ಬೆಳೆದಿದ್ದು ಎಲ್ಲಾನೂ ಹಳ್ಳಿಯಲ್ಲೆ ಆ ಹಳ್ಳಿಯ ಜೀವನ ಇಂದಿಗೂ ಎಂದೆಂದಿಗೂ ಅವಿಸ್ಮರಣೀಯವಾದದ್ದು.ಅವಳು ಬೇಳೆದಿದ್ದು ಒಂದು ಬಡ ಕುಟುಂಬದಲ್ಲಿ.ಅವಳ ಮನೆಯಲ್ಲಿ ಒಬ್ಬ ತಮ್ಮ ,ಅಪ್ಪ ಅಮ್ಮ ಮತ್ತು ಇವಳಿಗೋಬ್ಬಳು ಅಕ್ಕತುಂಬಾನೆ ಸಂಪ್ರದಾಯಸ್ಥ ಕುಟುಂಬ.ಬಡವರಾದರು ಹೊಟ್ಟೆ ಬಟ್ಟೆಗೆ ಏನು ತೊಂದರೆ ಇರಲಿಲ್ಲ.ಸಂಭದಿಕರ ಜೋತೆಯಾಗಲಿ ಸ್ನೇಹಿತರ ಜೋತೆಗಾಗಲಿ ಯಾರ ಹತ್ತಿರನೂ ಮಾತನಾಡದ ತುಂಬಾ ನಾಚಿಕೆ ಸ್ವಭಾವದ ಮುಗ್ದ ಹುಡುಗಿ.
ಅವಳು ಹೈಸ್ಕೂಲ್ ಗೆ ದಿನಾಲು ಆರು ಕೀಲೊಮೀಟರ್ ನಡೆದುಕೊಂಡು ಹೋಗಿ ಬರ್ತಾ ಇದ್ದಳು. ಒಂಬತ್ತನೇ ಕ್ಲಾಸ್ ನಲ್ಲಿ ಇದ್ದಾಗ ಅವಳ ಜೋತೆಗೆ ಅವಳ ಊರಿಂದ ಕೆಲವು ಮಂದಿ ಹುಡುಗ ಹುಡುಗಿಯರು ಜೋತೆಗೆ ಹೋಗುತ್ತಿದ್ದರು . ಇವಳುಶಾಲೆಗೆ ಹೋಗೊದು ಬರೋದು ಅಷ್ಟೆ ಮಾಡ್ತಾ ಇದ್ದಳು ಅದು ಬಿಟ್ಟು ಬೇರೆ ಏನು ವಿಷಯದ ಕಡೆ ಗಮನ ಹರಿಸುತ್ತಿರಲಿಲ್ಲ. ಹೀಗೆ ದಿನ ಕಳೆದಂತೆ ಅವಳಿಗೆ ಜೋತೆಯಲ್ಲಿ ಹೋಗುತ್ತಿದ್ದ ಓರ್ವ ಹುಡುಗನ ಪರಿಚಯವಾಯಿ.
ನಂತರ ಇಬ್ಬರಿಗೂ ಗಾಡವಾದ ಗೆಳತನವಾಗುತ್ತೆ. ಹಾಗೆ ಗೆಳತನ ಪ್ರೀತಿಗೆ ತಿರುಗಿ ಪ್ರೀತಿಸಲು ಪ್ರಾರಂಭಿಸುತ್ತಾರೆ.
ಅವಳು 2nd ಪಿಯುಸಿ ಮುಗಿಸಿ ಮುಂದೆ ಓದುಲು ಆಸೆ ಅದರೆ ಅವರ ಮನೆಯಲಿ ಬಿಡದೆ ಮದುವೆ
ಮಾಡಲು ಮುಂದಾಗುತ್ತಾರೆ. ಅವಳು ಮದುವೆಗೆ ಒಪ್ಪದೆ ಸಿಟಿಯಲ್ಲಿ ಇರುವ ಅವಳ ಅಕ್ಕ-ಬಾವನ ಮನೆಗೆ
ಹೋಗುತ್ತಾಳೆ ಅಲ್ಲಯೆ ಒಂದು ಸಣ್ಣ ಕೆಲಸಕ್ಕೆ ಸೇರಿಸಿಕೋಳ್ಳುತ್ತಾಳೆ ಹಾಗೆಯೇ ಒಂದು ವರ್ಷ ಕಳಿಯುತ್ತೆ ಅಲ್ಲಿಯೆ ಕೆಲಸ ಮಾಡುವ ಹುಡಗ ಪ್ರೀತಿಸುವುದಾಗಿ ತಿಳಿಸುತ್ತಾನೆ ಆಗ ಬೇಸರಗೊಂಡು ಕೆಲಸ ಬಿಟ್ಟು ಹಳ್ಳಿಗೆ ವಾಪಸ್ಸಾಗುತ್ತಾಳೆ.
ಮತ್ತೆ ಪ್ರೀಯತಮನ ಬೇಟಿ ಮಾಡಿ ಮದುವೆ ಬಗ್ಗೆ ಮಾತನಾಡಿ ಮದುವೆಯಾಗಲು ತಿಳುಸುತ್ತಾಳೆ ಜಾತಿ- ಬೇಧ ಎದುರಾಗುತ್ತೆ. ಇವರ ಇಬ್ಬರು ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲೂ ತಿಳಿದು ಹುಡಿಗಿಗೆ ಮದುವೆ ಮಾಡಲು ಬೇರೆ ಕಡೆ ವರನನ್ನು ಹುಡುಕುತ್ತಾರೆ. ಆಗ ಇವಳು ಪ್ರೀಯತಮನಿಗೆ ಹೋಗಿ ತನ್ನ ಮದುವೆ ಬಗ್ಗೆ ತಿಳುಹಿಸಿ,
ಅವನು ಗಾಬರಿಗೊಂಡು ಅವನ ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡಿ ಹುಡುಗಿಗೆ ತಿಳಿಸಲು ಹೇಳುತ್ತಾರೆ.
ಅದರೆ ಜಾತಿ- ಬೇಧ ಹುಡುಗಿ ಮನೆಯಲ್ಲಿ ಒಪ್ಪುದಿಲ್ಲ ಬೇರೆ ವರನ ಜೋತೆ ಮದುವೆ ಮಾಡಲು ನಿಶ್ಚಯಿಸುತ್ತಾರೆ. ಇವಳ ಮದುವೆ ಸಮಯದಲ್ಲಿ ಎಲ್ಲಾರು ಮದುವೆ ಮಂಟಪಕ್ಕೆ ಹೋಗುವ ದಾರಿಯಲ್ಲಿ ಆಕಸ್ಮಿಕವಾಗಿ ಪ್ರೀಯತಮನ ಕಾರು ಎದುರು ಅಗುತ್ತೆ ಅದನ್ನು ಅವಳು ಕಾರಿನಲ್ಲಿ ಇರುವದನ್ನು ನೋಡಿ ಅವನು ಅವಳ ಗುಂಗಿನಲ್ಲೇ ಕಾರು ಒಡಿಸಿ ಬೇರೆ ಲಾರಿಗೆ ಡಿಕ್ಕಿ ಹೋಡೆದ್ದು ಅಪಘಾತವಾಗುತ್ತೆ. ಅಲ್ಲಿ ಮದುವೆ ಶಾಸ್ತ್ರ,ಇಲ್ಲಿ ಅವನ ಶಸ್ತ್ರಚಿಕಿತ್ಸೆ, ಅಲ್ಲಿ ಮದುವೆ ಸಡಗರ,ಇಲ್ಲಿ ಸುತಕದ ಚಾಯೇ ಕೊನೆಗೂ ಅವಳ ಮದುವೆ ಅಗಿಯೇ ಹೋಯಿತ್ತು. ಇಲ್ಲಿ ಅವನು ಕೊನೆ ಉಸಿರು ಬಿಟ್ಟ.
ಅವಳ ಮದುವೆಯಾದ 9ತಿಂಗಳಿಗೆ ಗಂಡನ ಮನೆಯಿಂದ ತವರು ಮನೆಗೆ ಬರುತ್ತಾಳೆ ಎರಡು ದಿನ ಕಳಿದ ಮೇಲೆ ಅವಳು ಗಂಡನಿಗೆ ಅವಳ ತೋಟ ತೋರಿಸಲು ಕರೆದ್ಯೂತ್ತಾಳೆ. ಇವಳ ತೋಟಕ್ಕೆ ಹೋಗುವಾ ದಾರಿಯಲೇ ಪ್ರೀತಮನ ತೋಟವಿರುವುದು ಹಾಗೇ ಹೋಗುವಾಗ ಪ್ರೀಯತಮನ ಅತ್ತಿಗೆ ಎದುರು ಆಗುತ್ತಾರೆ ಅವಳು ಅಲ್ಲಿಯೆ ನಿಂತು.
ಮಾತು ಮುದುವರಿಸುತ ಆ ಕಡೆ ಈ ಕಡೆ ನೋಡುತ್ತಿರುವ ಸಮಯದಲ್ಲಿ ಒಂದು ಸಮಾಧಿ ಕಾಣ್ಣುತ್ತೆ ಅವಳು ಯಾರದು
ಅದು ಸಮಾಧಿ ಅಂತ ಪ್ರಶ್ನಿಸಿದಳು. ಅದಕ್ಕೆ ಅವರು ನನ್ನ ಮೈದುನದೆಂದು ಉತ್ತರಸಿದರು ಹಾಗೆ ಏನಾಯಿತು!
ಎಂದಳು ಅವರು ವಿವರವಾಗಿ ಹೇಳುತ್ತಿದಾಗೇ ಕುಸಿದು ಬಿದ್ದಳು. ಅದನ್ನು ಗಮನಿಸಿದ ಗಂಡ ಅವಳನ್ನು ಮನೆಗೆ ಕರೆದ್ಯೊದನು. ಆಗ ಅವಳಿಗೆ 5ತಿಂಗಳು ಗರ್ಭವತಿಯಾಗಿದ್ದಳು. ಅವಳು ಶಾಕ್ ನಿಂದ ಹೋರಬಾರಲೇ ಇಲ್ಲ.
ಅವಳು ಒಂದು ಮಗುವಿಗೆ ಜನ್ಮ ಕೋಟ್ಟಳು ಅವಳು ಸ್ವಲ್ಪ ವಾಸ್ತವ ಸಿತ್ಥಿಗೆ ಬರುತ್ತಾಳೆ ಮಗುವಿಗೆ 3ತಿಂಗಳು ಆಗುತ್ತಿದಾಗೆ ಗಂಡನ ಮನೆಗೆ ಕಳುಹಿಸಿದರು. ಆದರೆ ಅವಳು ಹಳೆಯ ವಿಷಯಗಳು ನೆನಪು ಮಾಡಿಕೊಂಡು ಮನಸ್ಸಿನಲ್ಲಿ ನೋವು, ವೇದನೆ, ದಃಖ ಪಡುತ್ತಾ ಅಳುತಿದ್ದಳು. ಸರಿಯಾಗಿ ಸಂಸಾರ ನಿಭಾಹಿಸುವುದಿಲ್ಲ ಇದನ್ನು ಗಮನಿಸಿದ ಗಂಡ ಇವಳು ಹುಚ್ಚಿಯೆಂದು ಅವಳ ತವರು ಮನೆಗೆ ಕಳುಹಿಸಿ, ಮತ್ತೆ ಎಂದಿಗೂ ಕರೆದ್ಯೂಯುವುದಿಲ್ಲ.
ಅಸಾಯಕ ಸಿತ್ಥಿಯಲ್ಲಿ ಇದ್ದಾ ಅವಳು ಮಗುವನ್ನು ಅಕ್ಕನ ಮನೆಯಲ್ಲಿ ಬಿಟ್ಟು, ಅವಳು ತವರು ಮನೆಯಲೇ ಈಗಲೂ ಹುಚ್ಚಿಯಾಗೆ ನಟನೆಮಾಡುತಾ ಇದ್ದಾಳೆ ನೋಡಿ ವಿಧಯಾಟ ಇವಳ ಬಾಳು ಶೂನ್ಯವಾಗಿದೆ. ಪ್ರೀತಿಸಿದ ಪ್ರೀಯತಮ ಇಲ್ಲ, ಕಟ್ಟಿಕೊಂಡ ಗಂಡ ಇಲ್ಲ ಈಗ ಅವಳು ಹೆತ್ತವರಿಗೆ ಭಾರವಾಗಿ ಇಂದಿಗೂ ಜೀವಂತವಾಗಿದ್ದಾಳೇ... ಇದು ಸತ್ಯ ಕಥೆ ಅವಳು
ಇನ್ನೊ ಇದ್ದಾಳೇ ಇದನ್ನು ....................................................................................................
....................................................................................................................ಎಲ್ಲಾರು...
ವಿಧಿಯಾಟ ಅನುತ್ತಾರೆ.....................................................................................ನಿಜಾನಾ?
Subscribe to:
Posts (Atom)